ಒಂದು ಮೂಲವಸ್ತು. ವಿರಳ ಅನಿಲಗಳಲ್ಲಿ (ಅಥವಾ ನಿಷ್ಕ್ರಿಯ ಅನಿಲಗಳು, ಇನರ್ಟ್ ಗ್ಯಾಸಸ್) ಒಂದು. ರಾಸಾಯನಿಕ ಚಿಹ್ನೆ Ar.; ಪರಮಾಣು ಸಂಖ್ಯೆ ೧೮; ಪರಮಾಣು ತೂಕ ೩೯.೯೪೪. ಇದನ್ನು ಸಾಮಾನ್ಯವಾಗಿ ದ್ರವಗಾಳಿಯ ಆಂಶಿಕಬಟ್ಟಿ ಇಳಿಸುವ ಮೂಲಕ ಪಡೆಯುತ್ತಾರೆ. ಇದನ್ನು ಆವರ್ತಕೋಷ್ಟಕದ ಸೊನ್ನೆಗುಂಪಿನಲ್ಲಿ (ಜಿರೊ ಗ್ರೂಪ್) ಸೇರಿಸಲಾಗಿದೆ. 

ಆರ್ಗಾನ್ ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ. ಸಾಂದ್ರತೆ ೧೯.೯೫. ವಿರಳಾನಿಲಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಇದನ್ನು ಇತರ ಅನಿಲಗಳೊಡನೆ ಬೆರಸಿ ಜಾಹೀರಾತು ದೀಪಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ವಿರಳಾನಿಲಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ